ಮಕ್ಕಳ ಆರಂಭಿಕ ಬಾಲ್ಯದಲ್ಲಿ ಅಂದರೆ ಮೂರ್ನಾಲ್ಕು ವರ್ಷಗಳ ಮುಂಚೆ ಮಕ್ಕಳ ಜೊತೆ ಪೋಷಕರು ಅಥವಾ ದೊಡ್ಡವರು ಜೊತೆ ಸೇರಿ ಓದಿದರೆ ಮಕ್ಕಳಲ್ಲಿ ಬೇಗನೆ ಶಬ್ದಕೋಶ, ಕಲಿಕೆ ಮತ್ತು ಓದುವ ಕೌಶಲಗಳು ಹೆಚ್ಚಾಗುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಮಕ್ಕಳೊಂದಿಗೆ ಪೋಷಕರು ಪುಸ್ತಕ ಹಿಡಿದು ಕುಳಿತು ಓದುವುದರಿಂದ ಮತ್ತು ಆ ಪುಸ್ತಕಕ್ಕೆ ಸಂಬಂಧಪಟ್ಟಂತೆ ಮಕ್ಕಳೊಂದಿಗೆ ಚರ್ಚೆ ನಡೆಸುವುದು, ಅದರಲ್ಲಿರುವ ಚಿತ್ರಗಳನ್ನು ತೋರಿಸಿ ವಿವರಿಸಿ ಹೇಳುವುದು, ಪುಸ್ತಕದಲ್ಲಿರುವ ಪಾತ್ರಗಳ ಕುರಿತು ಭಾವನಾತ್ಮಕವಾಗಿ ಮಾತನಾಡುವುದರಿಂದ ಮಕ್ಕಳಲ್ಲಿ ಪೂರ್ವ ಪ್ರಾಥಮಿಕ ಹಂತದಲ್ಲಿಯೇ ಓದುವ ಕೌಶಲ್ಯ […]
↧