ಲಂಡನ್/ನವದೆಹಲಿ: ಹ್ಯಾಕರ್‌ಗಳ ದಾಳಿಯಿಂದ ಭಾರತವೂ ಸೇರಿ ವಿಶ್ವದ 150 ದೇಶಗಳಲ್ಲಿನ 2 ಲಕ್ಷ ಕಂಪ್ಯೂಟರ್‌ಗಳಿಗೆ ಹಾನಿಯಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ‘ವನ್ನಾಕ್ರೈ’ ಎಂಬ ಕುತಂತ್ರಾಂಶ ಮೂಲಕ ಕಂಪ್ಯೂಟರ್‌ಗಳಲ್ಲಿನ ದತ್ತಾಂಶಗಳನ್ನು ಸಂಕೇತಾಕ್ಷರಗಳಾಗಿ ಹ್ಯಾಕರ್‌ಗಳು ಮಾರ್ಪಡಿಸಿದ್ದಾರೆ. ಇದರಿಂದಾಗಿ ದಾಳಿಗೆ ಒಳಗಾಗಿರುವ ಸುಮಾರು 2 ಲಕ್ಷ ಕಂಪ್ಯೂಟರ್‌ಗಳಲ್ಲಿನ ಕಡತಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ. ಹಾನಿಗೊಳಗಾದ ಕಂಪ್ಯೂಟರ್‌ಗಳಮ್ಮು ಸರಿಪಡಿಸುವ ಕೆಲಸ ನಡೆಯುತ್ತಿದ್ದು ಸೋಮವಾರದಿಂದ ಎಂದಿನಂತೆ ಕೆಲಸ ನಡೆಯಲಿದೆ ಎಂದು ಯುರೋಪ್ ವಿಭಾಗದ ಪೊಲೀಸ್ ಏಜೆನ್ಸಿ ತಿಳಿಸಿದೆ.
↧