ಹಣ್ಣುಗಳಲ್ಲಿ ಕಲೆ ಅರಳಿಸಿ ಪ್ರದರ್ಶನಕ್ಕಿಡುವುದನ್ನು ನಾವು ನೋಡಿದ್ದೇವೆ. ಆದರೆ ಸ್ಕಾಟ್ಲಂಡ್‌ನ ವಿವಿಯೊಂದರಲ್ಲಿ ಇಡೀ ಅನಾನಸ್‌ಹಣ್ಣನ್ನೇ ವಿಶೇಷ ಕಲೆ ಎಂದು ಪ್ರದರ್ಶಕ್ಕಿಟ್ಟಿದ್ದಾರೆ. ಆದದ್ದಿಷ್ಟು, ಇಲ್ಲಿಯ ರಾಬರ್ಟ್‌ಗಾರ್ಡನ್‌ವಿವಿಯ ವಿದ್ಯಾರ್ಥಿಗಳು ತಾವು ತಂದಿದ್ದ ಅನಾನಸ್‌ಹಣ್ಣನ್ನು ಮರೆತು ಮೇಜಿನ ಮೇಲೆಯೇ ಬಿಟ್ಟು ಮನೆಗೆ ಹೋಗಿದ್ದರು. 4 ದಿನಗಳ ಬಳಿಕ ಕಾಲೇಜಿಗೆ ಮರಳಿದಾಗ ಅವರಿಗೆ ಆಶ್ಚರ್ಯ ಕಾದಿದೆ. ಅನಾನಸನ್ನು ಕಲಾ ಪ್ರಕಾರ ಎಂದು ತಿಳಿದ ವಿವಿ, ವಿಶೇಷವಾದ ಗಾಜಿನ ಮೇಜಿನಲ್ಲಿ ಹಣ್ಣನ್ನು ಇರಿಸಿದೆ. ತಮ್ಮ ವಿವಿಯಲ್ಲಿ ಅನಾನಸ್‌ಹಣ್ಣನ್ನೂ ಗುರುತಿಸಲಾರದ ಮೂರ್ಖರಿದ್ದಾರಾ ಎಂದು ವಿದ್ಯಾರ್ಥಿಗಳು ಆಶ್ಚರ್ಯಗೊಂಡಿದ್ದಾರೆ.
↧