ಲಂಡನ್: ಪ್ರಿನ್ಸ್ ಚಾರ್ಲ್ಸ್ ರೊಂದಿಗೆ ಮದುವೆಯಾದ ವಾರದಲ್ಲೇ ರಾಣಿ ಡಯಾನಾ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ರಹಸ್ಯ ಮಾಹಿತಿಯೊಂದು ಇದೀಗ ಸೋರಿಕೆಯಾಗಿದೆ. ಇಂಗ್ಲೆಂಡ್ ರಾಜಮನೆತನದ ಅದ್ದೂರಿ ಮದುವೆ ಎಂದೇ ಕರೆಯಲಾಗುವ ಪ್ರಿನ್ಸ್ ಚಾರ್ಲ್ಸ್ ಹಾಗೂ ರಾಣಿ ಡಯಾನಾ ಮದುವೆ ವ್ಯಾಪಕ ಸುದ್ದಿಯಾಗಿತ್ತು. ಆದರೆ ಮದುವೆಯಾದ ಕೇವಲ ಒಂದು ವಾರದ ಅವಧಿಯೊಳಗೇ ರಾಣಿ ಡಯಾನಾ ತಮ್ಮ ಕೈಯಲ್ಲಿನ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಇದೀಗ ಬಯಲಾಗಿದೆ. 1991ರಲ್ಲಿ ಸ್ನೇಹಿತನೊಬ್ಬನ ನೆರವಿನೊಂದಿಗೆ ಡಯಾನಾ ಆತ್ಮಹತ್ಯಾ ಟೇಪ್ ಮುದ್ರಿಸಿದ್ದರು […]
↧