ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಯುವತಿಯನ್ನು ಅಪಹರಿಸಿ, ಬಲವಂತವಾಗಿ ಮತಾಂತರಗೊಳಿಸಿರುವ ಘಟನೆ ನಡೆದಿದ್ದು, ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಥಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ರವಿತಾ ಮೇಘವಾರ್ ಎಂಬ 16 ವರ್ಷದ ಬಾಲಕಿಯನ್ನು ಸ್ಥಳೀಯ ಸಯೀದ್ ಸಮುದಾಯದ ಪ್ರಭಾವಿ ಕುಟುಂಬದವರು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ರವಿತಾ ಮೇಘವಾರ್ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆದರೆ ಅಪಹರಣಕ್ಕೊಳಗಾಗಿ, ಬಲವಂತದ ಮತಾಂತರಕ್ಕೆ ಗುರಿಯಾಗಿದ್ದಾಳೆ ಎನ್ನಲಾಗುತ್ತಿರುವ ಬಾಲಕಿ ತಾನು ಸ್ವಇಚ್ಛೆಯಿಂದಲೇ ನವಾಜ್ ಅಲಿ ಶಾ ನನ್ನು ವಿವಾಹವಾಗಿರುವುದಾಗಿ ತಿಳಿಸಿದ್ದಾಳೆ, ಈ ಬಗ್ಗೆ […]
↧