ನವದೆಹಲಿ: ಪೆಟ್ಯಾ ಸೈಬರ್ ದಾಳಿ ಇತಿಹಾಸದಲ್ಲೇ ಅತೀ ದೊಡ್ಡ ಸೈಬರ್ ದಾಳಿ ಎಂದು ಹೇಳಲಾಗುತ್ತಿದ್ದು, ಜಗತ್ತಿನಾದ್ಯಂತ ಬರೊಬ್ಬರಿ 150ಕ್ಕೂ ಹೆಚ್ಚು ದೇಶಗಳ ಮೇಲೆ ವೈರಸ್ ದಾಳಿ ಮಾಡಿದೆ ಎಂದು ಹೇಳಲಾಗುತ್ತಿದೆ. ಉಕ್ರೇನ್ ನಲ್ಲಿ ಮೊದಲ ದಾಳಿ ಮಾಡಿದ ಪೆಟ್ಯಾ, ಬಳಿಕ ಬಹುತೇಕ ಯೂರೋಪಿಯನ್ ದೇಶಗಳ ಕಂಪ್ಯೂಟರ್ ಗಳನ್ನು ಆಕ್ರಮಿಸಿಕೊಂಡಿದೆ. ಇತ್ತೀಚಿನ ವರದಿಗಳ ಪ್ರಕಾರ ಪೆಟ್ಯಾ ಇದೀಗ ಆಸ್ಟ್ರೇಲಿಯಾಗೂ ಪಸರಿಸಿದೆ ಎಂದು ಹೇಳಲಾಗುತ್ತಿದ್ದು, ಆಸ್ಟ್ರೇಲಿಯಾದ ಗ್ಲೋಬಲ್ ಲಾ ಸಂಸ್ಥೆ ಡಿಎಲ್ ಎ ಪೈಪರ್ ಲಿಮಿಟೆಡ್ ಕೂಡ ಸೈಬರ್ ದಾಳಿಗೊಳಗಾಗಿದೆ […]
↧