ನಮ್ಮ ದೇಶದಲ್ಲಿ ಭಕ್ತರು ದೇವರ ಹುಂಡಿಗೆ, ಪವಿತ್ರ ನದಿಗಳಿಗೆ ನಾಣ್ಯಗಳನ್ನು ಹಾಕುವುದು ಸಾಮಾನ್ಯ. ಆದ್ರೆ, ಚೀನ ದಲ್ಲೊಂದು ಅಜ್ಜಿ ಇಂಥದ್ದೇ ಕೆಲಸ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಅಂದ್ರೆ, ನಾಣ್ಯ ಎಸೆದದ್ದು ತಪ್ಪೇ ಎಂದು ನೀವು ಕೇಳಬಹುದು. ಎಸೆದದ್ದು ತಪ್ಪಲ್ಲ, ಎಸೆದಿದ್ದು ಎಲ್ಲಿಗೆ ಎನ್ನುವುದು ಮುಖ್ಯ. ಮಗ, ಸೊಸೆಯೊಂದಿಗೆ ಶಾಂಘೈನಿಂದ ಗುವಾಂಗ್‌ಜುಗೆ ಹೊರಟಿದ್ದ ಅಜ್ಜಿ, ವಿಮಾನಹತ್ತುತ್ತಿದ್ದಂತೆ, “ಭಗವಂತಾ, ಕಾಪಾಡಪ್ಪಾ. ಸುರಕ್ಷಿತವಾಗಿ ಕರೆದೊಯ್ಯಪ್ಪಾ’ ಎಂದು ಬೇಡುತ್ತಾ ವಿಮಾನದ ಎಂಜಿನ್ ನೊಳಕ್ಕೆ 8 ನಾಣ್ಯಗಳನ್ನು ಎಸೆದಿದ್ದಾರೆ. 7 ನಾಣ್ಯಗಳು ಗುರಿ […]
↧