ಟೋಕಿಯೋ : ನೈಋತ್ಯ ಜಪಾನಿನಲ್ಲಿ ಒಂದು ಪವಿತ್ರ ದ್ವೀಪವಿದೆ. ಅದರ ಹೆಸರು ಓಕಿನೋಶಿಮಾ. ಈ ದ್ವೀಪದ ವೈಶಿಷ್ಟ್ಯವೆಂದರೆ ಮಹಿಳೆಯರಿಗೆ ಇಲ್ಲಿ ಪ್ರವೇಶ ನಿಷಿದ್ಧ. ಪುರುಷರು ಈ ಪವಿತ್ರ ದ್ವೀಪವನ್ನು ಪ್ರವೇಶಿಸಬಹುದು -ಆದರೆ ನಗ್ನರಾಗಿ ! ಹಾಗಿದ್ದರೂ ಈ ವಿಶಿಷ್ಟ ದ್ವೀಪವನ್ನು ಯುನೆಸ್ಕೋ ಈಗ “ವಿಶ್ವ ಪಾರಂಪರಿಕ ತಾಣ’ವೆಂದು ಘೋಷಿಸಿದೆ. ಪವಿತ್ರ ಓಕಿನೋಶಿಮಾ ದ್ವೀಪವು ನೈಋತ್ಯ ಜಪಾನಿನ ಮುಖ್ಯ ದ್ವೀಪವಾಗಿರುವ ಕ್ಯೂಶು ಮತ್ತು ಕೊರಿಯ ಪರ್ಯಾಯ ದ್ವೀಪದ ನಟ್ಟನಡುವೆ ಇದೆ. ಒಂದು ಕಾಲದಲ್ಲಿ, ಎಂದರೆ ಸುಮಾರು ಕ್ರಿಸ್ತ ಶಕ […]
↧