ವಾಷಿಂಗ್ಟನ್: ಸೊಳ್ಳೆಗಳು ಕೆಲವರನ್ನು ಮಾತ್ರ ಹೆಚ್ಚಾಗಿ ಕಚ್ಚುವುದಲ್ಲದೆ, ಇನ್ನು ಕೆಲವರತ್ತ ಅಷ್ಟೊಂದು ಆಕರ್ಷಣೆಗೆ ಒಳಗಾಗುವುದಿಲ್ಲ. ಇದಕ್ಕೆ ಅಚ್ಚರಿಯ ಕಾರಣವನ್ನು ಅಮೆರಿಕದ ಸಂಶೋಧಕರು ಪತ್ತೆ ಮಾಡಿದ್ದಾರೆ. 10 ಜನರಲ್ಲಿ ಒಬ್ಬರು ಮಾತ್ರ ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸುತ್ತಾರೆ ಎಂದು ಫ್ಲೊರಿಡಾದ ವಿಶ್ವವಿದ್ಯಾಲಯದ ಪಿಎಚ್‌ಡಿ ಪ್ರಾಧ್ಯಾಪಕ ಜೆರ್ರಿ ಬಟ್ಲರ್ ತಿಳಿಸಿದ್ದಾರೆ. ಸೊಳ್ಳೆಗಳು ಆಹಾರದ ಉದ್ದೇಶಕ್ಕಾಗಿ ರಕ್ತ ಹೀರುವುದಿಲ್ಲ. ಬದಲಾಗಿ ಹೆಣ್ಣು ಸೊಳ್ಳೆಗಳು ಸಂತಾನೋತ್ಪತ್ತಿಗಾಗಿ ಪ್ರೋಟೀನ್‌ಗಳನ್ನು ಪಡೆಯುವುದಕ್ಕಾಗಿ ರಕ್ತ ಹೀರುತ್ತವೆ ಎಂದು ಅವರು ತಮ್ಮ ಸಂಶೋಧನಾ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ. ಶೇಕಡ 85ರಷ್ಟು ಜನರ […]
↧