ಇಸ್ಲಾಮಾಬಾದ್ : ಪಾಕಿಸ್ಥಾನ ಸರಕಾರದ ವೆಬ್‌ಸೈಟನ್ನು ಹ್ಯಾಕರ್‌ಗಳು ಹ್ಯಾಕ್ ಮಾಡಿರುವುದಾಗಿ ವರದಿಯಾಗಿದೆ. ಹ್ಯಾಕ್ ಮಾಡಲ್ಪಟ್ಟ ಪಾಕ್ ಸರಕಾರಿ ವೈಬ್ ಸೈಟಿನಲ್ಲಿ ಹ್ಯಾಕರ್‌ಗಳು ಭಾರತದ ರಾಷ್ಟ್ರ ಗೀತೆ ಮತ್ತು ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಹಾಕಿದ್ದಾರೆ. ಈ ಹ್ಯಾಕಿಂಗ್ ಕೃತ್ಯದ ಮೂಲವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. ಇದು ಭಾರತೀಯ ಹ್ಯಾಕರ್‌ಗಳ ಕೃತ್ಯವೆಂಬಂತೆ ಇದನ್ನು ಬಿಂಬಿಸಲಾಗಿದೆ ಎಂದು ವರದಿಗಳು ಹೇಳಿವೆ. -ಉದಯವಾಣಿ
↧