ಇಸ್ಲಾಮಾಬಾದ್ : ”ಪಾಕಿಸ್ಥಾನವನ್ನು ನಿಜವಾದ ಇಸ್ಲಾಮಿಕ್ ದೇಶವನ್ನಾಗಿ ಪರಿವರ್ತಿಸುವುದೇ ನನ್ನ ನೂತನ ಪಕ್ಷದ ಗುರಿ” ಎಂದು ಮುಂಬಯಿ ದಾಳಿಗಳ ಮಾಸ್ಟರ್ ಮೈಂಡ್, ನಿಷೇಧಿತ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಸ್ಥಾಪಕ ಹಾಫೀಜ್ ಸಯೀದ್ ಹೇಳಿಕೊಂಡಿದ್ದಾನೆ. ಹಾಫೀಜ್ ಸಯೀದ್ನ ನಿಕಟವರ್ತಿ ಸೈಫುಲ್ಲಾ ಖಾಲೀದ್ ಇಂದು ಮಂಗಳವಾರ “ಮಿಲ್ಲೀ ಮುಸ್ಲಿಂ ಲೀಗ್’ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾನೆ. ಸಾರ್ವಜನಿಕ ಶಿಸ್ತು ಮತ್ತು ಸುವ್ಯವಸ್ಥೆಗೆ ಬೆದರಿಕೆಯಾಗಿ ಪರಿಣಮಿಸಿರುವ ಕಾರಣಕ್ಕಾಗಿ ಸಯೀದ್ನನ್ನು ಈ ವರ್ಷ ಜನವರಿಯಿಂದ ಗೃಹ ಬಂಧನದಲ್ಲಿ ಇರಿಸಲಾಗಿದೆ. […]
↧