ನ್ಯೂಯಾರ್ಕ್: ಆನ್ ಲೈನ್ ವೇದಿಕೆಯಾಗಿರುವ ಯೂಟ್ಯೂಬ್ ಇನ್ನು ಮುಂದೆ ಗ್ರಾಹಕರಿಗೆ ಬ್ರೇಕಿಂಗ್ ನ್ಯೂಸ್ ನ್ನು ಸಹ ನೀಡಲಿದೆ. ಮೊಬೈಲ್ ಆಪ್ ಹಾಗೂ ವೆಬ್ ಸೈಟ್ ಗಳಲ್ಲಿ ಪ್ರತ್ಯೇಕವಾದ ವಿಭಾಗವನ್ನೇ ಬ್ರೇಕಿಂಗ್ ನ್ಯೂಸ್ ಗೆ ಯೂಟ್ಯೂಬ್ ನೀಡಲಿದೆ. ಯೂಟ್ಯೂನ್ ನಲ್ಲಿನ ಬ್ರೇಕಿಂಗ್ ನ್ಯೂಸ್ ಗೂಗಲ್ ಆಲ್ಗರಿದಂ (ಕ್ರಮಾವಳಿ) ಗಳನ್ನು ಅನುಸರಿಸಿ ಬ್ರೇಕಿಂಗ್ ನ್ಯೂಸ್ ನ್ನು ಯೂಟ್ಯೂಬ್ ನೀಡಲಿದೆ. ರೆಕಮೆಂಡೆಡ್ ಚಾನೆಲ್ ಗಳನ್ನೂ ಯೂಟ್ಯೂಬ್ ನೀಡಲಿದ್ದು, ಅತಿ ಶೀಘ್ರವೇ ಕ್ಷಣ ಕ್ಷಣದ ಮಾಹಿತಿ ಯೂಟ್ಯೂಬ್ ನಲ್ಲಿ ಲಭ್ಯವಾಗಲಿದೆ.
↧