ಬೀಜಿಂಗ್, ಮೇ 25: ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ನಿರ್ಮಾಣ ಯೋಜನೆಗಳನ್ನು ಬೀಜಿಂಗ್ ಸ್ಥಗಿತಗೊಳಿಸಬೇಕು ಎಂಬ ಬೇಡಿಕೆಯನ್ನು ಅಮೆರಿಕ ನಿಲ್ಲಿಸದಿದ್ದಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ಯುದ್ಧ ಅನಿವಾರ್ಯವಾಗಬಹುದು ಎಂದು ಚೀನಾದ ಸರಕಾರಿ ಸ್ವಾಮ್ಯದ ಸುದ್ದಿಪತ್ರಿಕೆ ಎಚ್ಚರಿಸಿದೆ. ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಬೀಜಿಂಗ್ ‘ಭೂಸುಧಾರಣಾ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಆರೋಪಿಸಿರುವ ವಾಷಿಂಗ್ಟನ್, ಚೀನಾವು ತನ್ನದೆಂದು ಹೇಳಿಕೊಳ್ಳುತ್ತಿರುವ ಮಾನವ ನಿರ್ಮಿತ ದ್ವೀಪಗಳು ಪ್ರಾದೇಶಿಕ ಸೇನಾ ನಿಯೋಜನೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಿಸಿದೆ. ‘‘ಚೀನಾವು ಈ ಪ್ರದೇಶದಲ್ಲಿ […]
↧