ಇಸ್ಲಾಮಾಬಾದ್ : ಪಾಕಿಸ್ಥಾನದ ಲಾಹೋರ್ ಮತ್ತು ಇತರ ಪ್ರಮುಖ ನಗರಗಳಲ್ಲಿ ಟೊಮೆಟೋ ಕೇಜಿಗೆ 300 ರೂ. ದಾಟಿದೆ. ಇದಕ್ಕೆ ಭಾರತವೇ ಕಾರಣವೆಂದು ಅಲ್ಲಿನ ರಾಜಕಾರಣಿಗಳು ಜನರಲ್ಲಿ ಭಾರತ ವಿರೋಧಿ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ಪಾಕಿಸ್ಥಾನದಲ್ಲಿ ಟೊಮೆಟೋ ಕೊರತೆ ಉಂಟಾದಾಗೆಲ್ಲ ಭಾರತದಿಂದ ಅದನ್ನು ಪರ್ಯಾಪ್ತ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದು ರೂಢಿ. ಆದರೆ ಭಯೋತ್ಪಾದನೆ, ಕದನ ವಿರಾಮ ಉಲ್ಲಂಘನೆ, ಭಾರತಕ್ಕೆ ಉಗ್ರರ ರವಾನೆ ಮುಂತಾದ ಕಾರಣಗಳಿಗಾಗಿ ಉಭಯ ದೇಶಗಳ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಿರುವುದರಿಂದ ಪಾಕಿಸ್ಥಾನಕ್ಕೆ ಭಾರತದಿಂದ ಟೊಮೆಟೋ ಆಮದು ಮಾಡಿಕೊಳ್ಳುವ […]
↧