ಅಂತಿಮವಾಗಿ ಜಪಾನ್ ದ್ವೀಪದ ಜನತೆ ತಮ್ಮ ಸಹಜವಾದ ನಡೆಯನ್ನು ಬದಿಗಿಟ್ಟು, ಅವರು ಅನುಭವಿಸಿದ ದಮನಕಾರಿ ನೀತಿ, ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಗಳ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ‘ಮೀಟೂ’ ಎಂಬ ಅಭಿಯಾನ ಆರಂಭಿಸಿ, ತಾವು ಲೈಂಗಿಕ ಕಿರುಕುಳ ಹಾಗೂ ಆದ ಅತ್ಯಾಚಾರಗಳ ಬಗ್ಗೆ ಬಾಯಿ ಬಿಡತೊಡಗಿದ್ದಾರೆ. ಜಪಾನ್ ಎಂದ ಕೂಡಲೇ ನೆನಪಿಗೆ ಬರುವುದು ಅದೊಂದು ಪಿತೃಪ್ರಧಾನ ವ್ಯವಸ್ಥೆಯುಳ್ಳ ದೇಶ. ವಿಚಿತ್ರವೆಂದರೆ, ಈ ದೇಶದಲ್ಲಿ ಮಹಿಳೆಯರು ತಮ್ಮ ಬಗೆಗಿರುವ ತಿರಸ್ಕಾರದ ಭಾವನೆಯಿಂದ ಅವರಿಗಾದ ಅನ್ಯಾಯ ನೋವುಗಳನ್ನು ಬಾಯಿ ಬಿಟ್ಟು ಹೇಳಿದ […]
↧