ವಾಷಿಂಗ್ಟನ್: ವಂಚಕ ನೀರವ್ ಮೋದಿ ತನ್ನ ಎಲ್ಲೆಯೊಳಗಿರುವುದಾಗಿ ಅಮೆರಿಕನ್ ಮಾಧ್ಯಮಗಳು ಮಾಡಿದ್ದ ವರದಿಯನ್ನು ಅಮೆರಿಕ ಸರಕಾರದ ಅಧಿಕಾರಿಯೊಬ್ಬರು ತಳ್ಳಿಹಾಕಿದ್ದಾರೆ. “ನೀರವ್ ಮೋದಿ ಅಮೆರಿದಲ್ಲಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಗಮನಿಸಿದ್ದೇವೆ. ಆದರೆ ಈ ಕುರಿತು ಖಾತ್ರಿಯಿಲ್ಲ” ಎಂದು ಅಮೆರಿಕ ಸರಕಾರದ ವಕ್ತಾರರು ತಿಳಿಸಿದ್ದಾರೆ. ನೀರವ್ನನ್ನು ಪತ್ತೆ ಮಾಡಲು ಅಮೆರಿಕ ಸಹಕಾರ ನೀಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಕ್ತಾರ “ಭಾರತೀಯ ಅಧಿಕಾರಿಗಳಿಗೆ ಕಾನೂನು ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ನೀಡಲು ನ್ಯಾಯಾಂಗ ಇಲಾಖೆಗೆ ಸೂಚಿಸುತ್ತೇವೆ” ಎಂದು ಆಂತರಿಕ ವ್ಯವಹಾರಗಳ ಇಲಾಖೆ ತಿಳಿಸಿದೆ. […]
↧