ಇಸ್ಲಾಮಾಬಾದ್: ಮಧ್ಯರಾತ್ರಿ ಬಾಗಿಲಿನ ಬೆಲ್ ಬಾರಿಸಿ ಪರಾರಿಯಾಗುವುದು, ಅಶ್ಲೀಲ ಫೋನ್ ಕರೆಗಳು, ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತ, ಕಾರನ್ನು ಬೆನ್ನಟ್ಟುವುದು, ಆಕ್ರಮಣಕಾರಿ ಧೋರಣೆಯನ್ನು ಪ್ರದರ್ಶಿಸುವುದು, ಮಕ್ಕಳನ್ನು ಬೆದರಿಸುವುದು- ಇವೆಲ್ಲ ಭಾರತೀಯ ದೂತಾವಾಸದ ಹಿರಿಯ ಅಧಿಕಾರಿಗಳಿಗೆ ಪಾಕಿಸ್ತಾನ ನೀಡುತ್ತಿರುವ ಕಿರುಕುಳದ ಕೆಲವು ಸ್ಯಾಂಪಲ್ಗಳು… ನೆರೆಹೊರೆಯವರ ಜಗಳದಲ್ಲಿ ಇವೆಲ್ಲ ಸಾಮಾನ್ಯ ಅಂದುಕೊಂಡರೂ, ಅಣ್ವಸ್ತ್ರ ಸಜ್ಜಿತ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಇಂತಹ ಬೆಳವಣಿಗೆಗಳು ಅತ್ಯಂತ ಗಂಭೀರವಾಗಿದೆ. 1947ರಿಂದೀಚೆಗೆ ಮೂರು ಯುದ್ಧಗಳನ್ನು ಮಾಡಿದ್ದರೂ ಜಮ್ಮು ಮತ್ತು ಕಾಶ್ಮೀರ ವಿವಾದ […]
↧