ನಾಯಿ ಸಾಕುವವರಿಗೆ ಒಂದು ಹುಚ್ಚಿರುತ್ತದೆ ಎಲ್ಲಿಯಾದರೂ ಮುದ್ದಾದ ನಾಯಿ ಮರಿಗಳನ್ನು ಕಂಡರೆ ಅವುಗಳನ್ನು ಮನೆಗೆ ತಂದು ಆಶ್ರಯ ನೀಡುತ್ತಾರೆ. ಚೀನಾದ ವ್ಯಕ್ತಿ ಕಾಡಿನ ಬದಿಯಲ್ಲಿ ಮುದ್ದಾದ ನಾಯಿ ಮರಿಯನ್ನು ಕಂಡರು. ಮೈತುಂಬಾ ಕಪ್ಪು ಕೂದಲು ಹೊಂದಿದ್ದ ಅದನ್ನು ಬಿಟ್ಟುಬರಲು ಮನಸ್ಸಾಗಲಿಲ್ಲ. ಹಾಗಾಗಿ ಅದನ್ನು ಮನೆಗೆ ತಂದು ಅದಕ್ಕೆ ಹಾಲು, ಜೋಳ ತಿನ್ನಿಸಿ ಬೆಳೆಸಿದರು. ಅದು ಪಕ್ಕದ ಮನೆಯಲ್ಲೇ ಇದ್ದ ಮತ್ತೂಂದು ನಾಯಿ ಜೊತೆ ಆಟವಾಡುತ್ತಾ ಬೆಳೆಯುತ್ತಿತ್ತು. ಅದು ತನ್ನ ಮುಂಗಾಲುಗಳನ್ನು ಎತ್ತಿ ಹಿಂಗಾಲುಗಳ ಮೇಲೆ ಸರಾಗವಾಗಿ ಓಡಾಡುತ್ತಿತ್ತು. […]
↧