ಇಸ್ಲಾಮಾಬಾದ್ : ಪಂಜಾಬ್ ಪ್ರಾಂತ್ಯದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆಗೈದ ಎನ್ನಲಾದ ಇಮ್ರಾನ್ ಅಲಿ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ವಿಫಲನಾದ ಟಿವಿ ಆ್ಯಂಕರ್ ಗೆ ಮೂರು ತಿಂಗಳ ಕಾಲ ತನ್ನ ಟಿವಿ ಶೋ ನಡೆಸದಂತೆ ಪಾಕಿಸ್ಥಾನದ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಟಿವಿ ಒನ್ ನ್ಯೂಸ್ ಚ್ಯಾನಲ್‌ನ ಆ್ಯಂಕರ್ ಶಾಹೀದ್ ಮಸೂದ್‌ಗೆ ನಿಶ್ಶರ್ತ ಲಿಖೀತ ಕ್ಷಮೆಯಾಚನೆಯನ್ನು ಸಲ್ಲಿಸುವಂತೆ ಪಾಕಿಸ್ಥಾನದ ವರಿಷ್ಠ ನ್ಯಾಯಮೂರ್ತಿ ಸಾಕೀಬ್ ನಿಸಾರ್ ಅವರು ಆದೇಶಿಸಿದರು. ಜನವರಿಯಲ್ಲಿ ಪ್ರಸಾರವಾದ ತನ್ನ […]
↧