ವಾಷಿಂಗ್ಟನ್: 5 ಕೋಟಿ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯು ರಾಜಕೀಯ ಕಾರಣಗಳಿಗಾಗಿ ಸೋರಿಕೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಒಂದೇ ದಿನದಲ್ಲಿ ಫೇಸ್‌ಬುಕ್‌ನ ಷೇರುಗಳು ಶೇ.7ರಷ್ಟು ಕುಸಿದಿದ್ದು, ಮಾರುಕಟ್ಟೆ ಮೌಲ್ಯದಲ್ಲಿ 40 ಶತಕೋಟಿ ಡಾಲರ್‌ನಷ್ಟು ನಷ್ಟ ಸಂಭವಿಸಿದೆ. ವಿಶ್ವದ ಬೃಹತ್ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿನ ಬಳಕೆದಾರರ ಮಾಹಿತಿಯು ಸೋರಿಕೆಯಾಗಿದೆ. 2016ರಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಈ ಸೋರಿಕೆಯಾಗಿದೆ. ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅನುಕೂಲವಾಗುವಂತೆ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಡೇಟಾ ವಿಶ್ಲೇಷಣೆ […]
↧