ಬೀಜಿಂಗ್ : ಭಾರತದ ಗಡಿಯಲ್ಲಿನ ಯಥಾ ಸ್ಥಿತಿಯನ್ನು ಬದಲಾಯಿಸುವ ಚೀನದ ಯಾವುದೇ ಯತ್ನದಿಂದ ಉಭಯ ದೇಶಗಳ ನಡುವೆ ಡೋಕ್ಲಾಂ ನಂತಹ ಇನ್ನೊಂದು ಸೇನಾ ಮುಖಾಮುಖೀ ಏರ್ಪಡಬಹುದು ಎಂದು ಭಾರತೀಯ ರಾಯಭಾರಿ ಗೌತಮ್ ಬಂಬವಾಲೆ ಎಚ್ಚರಿಸಿದ್ದಾರೆ. ಭಾರತದ ಗಡಿಯಲ್ಲಿ ಇನ್ನೊಂದು ಡೋಕ್ಲಾಂ ಸ್ಥಿತಿ ಉತ್ಪನ್ನವಾಗುವುದನ್ನು ಬುದ್ಧಿವಂತಿಕೆಯ, ಚಾಣಾಕ್ಷತನದ ಮತ್ತು ಮುಚ್ಚುಮರೆಯಿಲ್ಲದೆ ಮಾತುಕತೆಗಳ ಮೂಲಕ ನಿವಾರಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಂಬವಾಲೆ ಅವರು ತನ್ನ ಈ ಅಭಿಪ್ರಾಯಗಳನ್ನು ಹಾಂಕಾಂಗ್ನಲ್ಲಿನ ದಕ್ಷಿಣ ಚೀನ ಮಾರ್ನಿಂಗ್ ಪೋಸ್ಟ್ ಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದರು. […]
↧