ಕೋಲ್ಕತ್ತ: ವಿವಾದಾತ್ಮಕ ಬಾಂಗ್ಲಾದೇಶ ಲೇಖಕಿ ತಸ್ಲಿಮಾ ನಸ್ರೀನ್ ತಮ್ಮ ದೇಶದಿಂದ ಜೀವ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದರಿಂದ ಅಮೆರಿಕಾಕ್ಕೆ ಸ್ಥಳಾಂತರವಾಗಿದ್ದು, ನಾನು ಭಾರತವನ್ನು ಖಾಯಂ ಆಗಿ ತೊರೆದಿಲ್ಲ, ಸುರಕ್ಷಿತ ಎಂದೆನಿಸಿದಾಗ ಮತ್ತೆ ವಾಪಸಾಗುತ್ತೇನೆ ಎಂದಿದ್ದಾರೆ. “ಬಾಂಗ್ಲಾದೇಶದ ನಾಸ್ತಿಕ ಬ್ಲಾಗರ್ ಒಬ್ಬನನ್ನು ಕೊಂದ ಇಸ್ಲಾಂ ತೀವ್ರವಾದಿಗಳು ಬೆದರಿಕೆ ಹಾಕಿದ್ದರು. ಭೀತಿಯುಂಟಾಗಿತ್ತು. ಭಾರತೀಯ ಸರ್ಕಾರವನ್ನು ಭೇಟಿ ಮಾಡಬೇಕಿತ್ತು. ಅವಕಾಶ ಸಿಗುತ್ತಿಲ್ಲ. ಅದಕ್ಕೆ ಭಾರತ ಬಿಟ್ಟೆ. ಸುರಕ್ಷಿತ ಎಂದೆನಿಸಿದಾಗ ಹಿಂದಿರುಗುತ್ತೇನೆ” ಎಂದು ನಸ್ರೀನ್ ಟ್ವೀಟ್ ಮಾಡಿದ್ದಾರೆ. ಫೆಬ್ರವರಿಯಿಂದೀಚೆಗೆ ಮೂವರು ಜಾತ್ಯಾತೀತ ಬ್ಲಾಗರ್ ಗಳನ್ನು […]
↧