ಸತ್ತನೆಂದೇ ಭಾವಿಸಿದ್ದ ವ್ಯಕ್ತಿ ಬದುಕಿ ಬಂದು ಕಣ್ಣೆದುರು ನಿಂತಾಗ, ಮೊದಲು ನಮ್ಮ ಕಣ್ಣನ್ನು ನಮಗೇ ನಂಬಲಾಗುವುದಿಲ್ಲ. ಆದರೆ, ನಂತರ ಸಾವರಿಸಿಕೊಂಡು ಅವನು ಬದುಕಿರುವುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ರೊಮಾನಿಯಾದಲ್ಲಿ ವ್ಯತಿರಿಕ್ತವಾದ ಘಟನೆ ನಡೆದಿದೆ. ಇಲ್ಲಿ ಸತ್ತಿದ್ದಾನೆಂದು ಭಾವಿಸಿದ ವ್ಯಕ್ತಿಯೇ ಸ್ವತಃ ಕೋರ್ಟ್ ಮುಂದೆ ಬಂದು, ನಾನು ಬದುಕಿದ್ದೇನೆ ಎಂದರೂ ಕೋರ್ಟ್ ಅದನ್ನು ಒಪ್ಪಿಕೊಂಡಿಲ್ಲ. ಈತ ತನ್ನ ಊರು ಬಿಟ್ಟು ಟರ್ಕಿಗೆ ತೆರಳಿ ಅಲ್ಲಿ 20ಕ್ಕೂ ಹೆಚ್ಚು ವರ್ಷಗಳ ಕಾಲ ಬಾಣಸಿಗನಾಗಿ ಕೆಲಸ ಮಾಡಿದ್ದ. ಇವರಿಗೀಗ 63 ವರ್ಷ ವಯಸ್ಸು. […]
↧