ಸ್ಯಾನ್ ಫ್ರಾನ್ಸಿಸ್ಕೋ: ಫೇಸ್‌ಬುಕ್ ಬಳಕೆದಾರರ ಮತ್ತಷ್ಟು ಮಾಹಿತಿ ಸೋರಿಕೆಯಾಗಿರಬಹುದು ಎಂದು ಸ್ವತ: ಫೇಸ್‌ಬುಕ್ ಕಂಪನಿ ಆತಂಕ ವ್ಯಕ್ತಪಡಿಸಿದೆ. ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಮಾಹಿತಿ ಸೋರಿಕೆ ಮಾಡಿರುವಂತೆ ಇತರರಿಂದಲೂ ಮಾಹಿತಿ ಸೋರಿಕೆ ಅಥವಾ ಅನಪೇಕ್ಷಿತ ಚಟುವಟಿಕೆಗಳು ನಡೆದಿರಬಹುದು ಎಂದು ಫೇಸ್‌ಬುಕ್ ತನ್ನ ಬಳಕೆದಾರರಿಗೆ ಹಾಗೂ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ. ಬಳಕೆದಾರರ ಡೇಟಾ ದುರುಪಯೋಗ ಅಥವಾ ಇತರ ಅನಪೇಕ್ಷಿತ ಚಟುವಟಿಕೆಗಳು ಮತ್ತಷ್ಟು ಪತ್ತೆಯಾಗುವುದನ್ನು ನಾವು ನಿರೀಕ್ಷಿಸುತ್ತೇವೆ. ಶೀಘ್ರದಲ್ಲೇ ಇದು ಬಹಿರಂಗವಾಗಲಿದೆ ಎಂದು ಫೇಸ್‌ಬುಕ್ ತನ್ನ ತ್ರೈಮಾಸಿಕ ವರದಿಯಲ್ಲಿ ಮಾಹಿತಿ ನೀಡಿದೆ. […]
↧