ನೈರೋಬಿ: ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಣೆಕಟ್ಟು ಒಡೆದು ಕೆಸರು ಮಿಶ್ರಿತ ನೀರಿನ ಪ್ರವಾಹಕ್ಕೆ ಸಿಲುಕಿ 47 ಜನರು ಮೃತಪಟ್ಟಿದ್ದಾರೆ. ಮಧ್ಯ ಕೀನ್ಯಾದ ನಕುರು ನಗರದ ಸಮೀಪವಿರುವ ಸೋಲೈನಲ್ಲಿ ಈ ದುರ್ಘಟನೆ ನಡೆದಿದೆ. ಭಾರತೀಯ ಮೂಲದ ಕೃಷಿಕ ಮನ್ಸುಕುಲ್ ಪಟೇಲ್ ಎಂಬುವವರು ತಮ್ಮ ಜಮೀನಿನಲ್ಲಿ ನೀರಿನ ಸಂಗ್ರಹಕ್ಕಾಗಿ ಅಣೆಕಟ್ಟು ನಿರ್ಮಿಸಿದ್ದರು. ಈ ಅಣೆಕಟ್ಟು ಭಾರಿ ಮಳೆಯಿಂದಾಗಿ ಒಡೆದಿದೆ. ಕೆಸರು ಮಿಶ್ರಿತ ನೀರು ಅಣೆಕಟ್ಟೆಯ ಕೆಳಭಾಗದ ಪ್ರದೇಶದಲ್ಲಿದ್ದ ಮನೆಗಳಿಗೆ ನುಗ್ಗಿದ್ದರಿಂದ 20 ಮಕ್ಕಳು ಸೇರಿ ಕನಿಷ್ಠ 47 […]
↧