ಇಸ್ಲಾಮಾಬಾದ್: 2008ರ ಮುಂಬಯಿ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂಬ ತಮ್ಮ ಬಹಿರಂಗ ಹೇಳಿಕೆಯನ್ನು ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪರಿಣಾಮ ಏನೇ ಆದರೂ ಎದುರಿಸಲು ಸಿದ್ಧ ಎಂದೂ ಅವರು ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳು ರಾಜಾರೋಷವಾಗಿ ಸಕ್ರಿಯವಾಗಿರುವುದನ್ನು ಇದೇ ಮೊದಲ ಬಾರಿಗೆ ಷರೀಫ್ ಟಿವಿ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದರು. ಈ ರೀತಿ ಸರಕಾರೇತರ ಶಕ್ತಿಗಳು ಗಡಿದಾಟಿ ಮುಂಬಯಿಯಲ್ಲಿ ಅಮಾಯಕರ ಹತ್ಯೆಗೆ ಅವಕಾಶ ನೀಡಿರುವ ನೀತಿಯನ್ನು ಅವರು ಪ್ರಶ್ನಿಸಿದ್ದರು. ಷರೀಫ್ ಹೇಳಿಕೆಯಿಂದ ಪಾಕ್‌ನಲ್ಲಿ ತೀವ್ರ ವಿವಾದ […]
↧