ಇಸ್ಲಾಮಾಬಾದ್: ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಜತೆಗಿರಬೇಕಾದ ಸಮಯದಲ್ಲಿ ಕನಿಷ್ಠ ಆರು ಇಂಚು ಅಂತರ ಕಾಯ್ದುಕೊಳ್ಳುವಂತೆ ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ಆಧಿಸೂಚನೆ ಹೊರಡಿಸಿದೆ. ಇದರ ಬೆನ್ನಲ್ಲೇ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು ವಿರುದ್ಧದ ಚರ್ಚೆಗಳು ತೀವ್ರವಾಗಿವೆ. ಇಸ್ಲಾಮಾಬಾದ್ ಮೂಲದ ಬಹರಿಯಾ ವಿಶ್ವವಿದ್ಯಾಲಯವು ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್‌ನ ಈ ಮೂರೂ ಕ್ಯಾಂಪಸ್‌ನಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕಳೆದ ವಾರ ಈ ಆದೇಶ ಹೊರಡಿಸಿದೆ. ”ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಪರಸ್ಪರರಲ್ಲಿ ಕನಿಷ್ಠ ಆರು ಇಂಚು ದೂರದಲ್ಲಿ ನಿಲ್ಲುವಂತೆ […]
↧