ವಾಷಿಂಗ್ಟನ್: ಸಾಫ್ಟ್ ವೇರ್ ಅಭಿವೃದ್ದಿಪಡಿಸುವ ನೂರಕ್ಕೂ ಹೆಚ್ಚಿನ ಹೊರಗುತ್ತಿಗೆ ಸಂಸ್ಥೆಗಳಿಗೆ ಗೂಗಲ್ ಜಿಮೇಲ್ ಇನ್ ಬಾಕ್ಸ್ ಸ್ಕ್ಯಾನ್ ಮಾಡುವ ಅವಕಾಶವನ್ನು ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ನೀಡಿದೆ. ಈ ಹೊರಗುತ್ತಿಗೆ ಸಂಸ್ಥೆಗಳು ಬೇರೆಯವರ ಜಿಮೇಲ್ ಓದುವುದು ಅಷ್ಟೇ ಅಲ್ಲದೆ ತಮ್ಮದೇ ಸಂಸ್ಥೆಯ ಉದ್ಯೋಗಿಗಳ ಮೇಲ್ ಸಹ ಓದುವುದಕ್ಕೆ ಮುಂದಾಗಲಿದೆ. ಇದೇ ವೇಳೆ ಜಿಮೇಲ್ ಇನ್ ಬಾಕ್ಸ್ ನಲ್ಲಿ ಹೆಚ್ಚಿನ ಜಾಹೀರಾತುಗಳು ಕಂಡುಬರುವುದಾಗಿ ವರದಿಯಾಗಿದ್ದು, ಪ್ರಯಾಣ ದರಗಳು, ಶಾಪಿಂಗ್ ವಿವರಗಳಿರುವ ಬಹುರಾಷ್ಟ್ರೀಯ ಸಂಸ್ಥೆಗಳ ಜಾಹೀರಾತುಗಳು ಜಿಮೇಲ್ ನಲ್ಲಿ ಕಾಣಲಿದೆ. […]
↧