ಇಸ್ಲಾಮಾಬಾದ್: ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಿದ 16 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಹಿಂದು ಅಭ್ಯರ್ಥಿಯೊಬ್ಬರು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯಿಂದ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ. ದಕ್ಷಿಣ ಸಿಂಧ್ ಪ್ರಾಂತ್ಯದ ರಾಷ್ಟ್ರೀಯ ಅಸೆಂಬ್ಲಿ(NA-222)ಗೆ ತರ್ಪಾರ್ಕರ್-2 ಕ್ಷೇತ್ರದಿಂದ ಮಹೇಶ್ ಕುಮಾರ್ ಮಲಾನಿ ಸ್ಪರ್ಧಿಸಿದ್ದರು. ಕಣದಲ್ಲಿದ್ದ 14 ಅಭ್ಯರ್ಥಿಗಳನ್ನು ಸೋಲಿಸಿರುವ ಮಹೇಶ್ ಮೊದಲ ಬಾರಿಗೆ ಜಯ ಸಾಧಿಸಿದ್ದಾರೆ. ತನ್ನ ಪ್ರತಿಸ್ಪರ್ಧಿ ಗ್ರಾಂಡ್ ಡೆಮಾಕ್ರಟಿಕ್ ಅಲಯನ್ಸ್ನ ಅಭ್ಯರ್ಥಿ ಅರಬ್ ಜಕಾಉಲ್ಲಾಹ್ ವಿರುದ್ಧ 1,06,630 ಮತಗಳನ್ನು ಪಡೆದಿರುವ ಮಹೇಶ್ […]
↧