ಢಾಕಾ: ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ”ನೆರೆಯ ಪಾಕಿಸ್ತಾನವು ಭಯೋತ್ಪಾದನೆಯನ್ನು ಉತ್ತೇಜಿಸುವ ಮೂಲಕ ರಗಳೆ ಸೃಷ್ಟಿಸುತ್ತಿದೆ,” ಎಂದು ಕಟು ಪದಗಳಿಂದ ಭಾನುವಾರ ಟೀಕಿಸಿದರು. ಬಾಂಗ್ಲಾ ಪ್ರವಾಸದ ಎರಡನೇ ಮತ್ತು ಅಂತಿಮ ದಿನವಾದ ಭಾನುವಾರ ಢಾಕಾ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭ ಉದ್ದೇಶಿಸಿ ಮಾತನಾಡಿದ ಮೋದಿ, ”ಪದೇಪದೆ ಭಾರತದ ಶಾಂತಿ ಕದಡುವ ಪ್ರಯತ್ನವನ್ನು ಪಾಕ್ ಮಾಡುತ್ತಲೇ ಇದೆ. ಭಯೋತ್ಪಾದನೆಗೆ ಗಡಿಗಳಿಲ್ಲ. ಅಮಾಯಕರು ಉಗ್ರರ ದಾಳಿಗೆ ಬಲಿಯಾಗುತ್ತಿದ್ದಾರೆ,” ಎಂದರು. ಇದೇ ವೇಳೆ ಉಗ್ರರ ವಿರುದ್ಧದ ಸಮರ […]
↧