ಜಿನೆವ: ನೋಬೆಲ್ ಪ್ರಶಸ್ತಿ ವಿಜೇತ, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ (80) ಶನಿವಾರ ನಿಧನರಾದರು. ಕೋಫಿ ಅನ್ನಾನ್ ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಸ್ಸ್ವಿಟ್ಝರ್‌ಲ್ಯಾಂಡ್‌ನ ಜೆನವಾದಲ್ಲಿನ ಕೋಫಿ ಅನ್ನಾನ್ ಕೊನೆಯುಸಿರೆಳೆದಿದ್ದಾರೆ. ವಿಶ್ವಸಂಸ್ಥೆಯ ಮೊದಲ ಕಪ್ಪು ಪ್ರಧಾನ ಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರಿಗೆ 2001ರಲ್ಲಿ ನೋಬೆಲ್ ಪ್ರಶಸ್ತಿ ಸಿಕ್ಕಿತ್ತು. ಕೋಫಿ ಅನ್ನಾನ್ ಅವರ ಸಂಸ್ಥೆ, ಶನಿವಾರ ಅವರ ಸಾವಿನ ಸುದ್ದಿಯನ್ನು ಟ್ವಿಟರ್ ಮೂಲಕ ಖಚಿತಪಡಿಸಿದೆ. ಸಹಾಯವನ್ನು ಕೇಳಿ ಬರುವವರಿಗೆ ಕೋಫಿ ಅನ್ನಾನ್ ಎಂದಿಗೂ ನಿರಾಶೆ […]
↧