ವಾಷಿಂಗ್ಟನ್: ದೇಶದ ಆರ್ಥಿಕಾಭಿವೃದ್ಧಿ ಪ್ರಗತಿಯಲ್ಲಿ ಭಾರತ- ಚೀನಾ ದೇಶವನ್ನು ಹಿಂದಿಕ್ಕಿದೆ ಎಂದು ವಿಶ್ವಬ್ಯಾಂಕ್ ಗುರುವಾರ ಹೇಳಿದೆ. ಭಾರತ ತನ್ನ ಆರ್ಥಿಕಾಭಿವೃದ್ಧಿ ಪ್ರಗತಿಯನ್ನು ಶೇ. 7.5ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ಚೀನಾ ದೇಶವನ್ನು ಹಿಂದಿಕ್ಕಿದೆ ಎಂದು ವಿಶ್ವ ಬ್ಯಾಂಕ್ ನ ಉಪಾಧ್ಯಕ್ಷ ಹಾಗೂ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ಬಸು ಹೇಳಿದ್ದಾರೆ. ಪ್ರಸ್ತುತ ಚೀನಾ ದೇಶದ ಆರ್ಥಿಕ ಪ್ರಗತಿ ಶೇ.7.1ರಷ್ಟಿದೆ. ಭಾರತದಲ್ಲಿನ ಪ್ರಸಕ್ತ ಆರ್ಥಿಕ ಕ್ಷೇತ್ರದಲ್ಲಿನ ಸುಧಾರಣೆಗಳು ಮತ್ತು ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿಯ ಕಚ್ಛಾತೈಲ ಬೆಲೆ ಇಳಿಕೆ ವಾಣಿಜ್ಯೋದ್ಯಮ ರಂಗದ […]
↧