ನವದೆಹಲಿ: ಭಾರತೀಯ ಯೋಧ ಅಭಿನಂದನ್ ಅವರ ಬಿಡುಗಡೆ ನಿರ್ಧಾರವನ್ನು ಸಂಸತ್ತಿನಲ್ಲಿ ಪ್ರಕಟಿಸಿದ ಪಾಕ್ ಪ್ರಧಾನಿ ಇಮ್ರಾನ್‌ಖಾನ್, ಇದೇ ವೇಳೆ ಮೈಸೂರು ಹುಲಿ ಟಿಪ್ಪು ಸುಲ್ತಾನನ್ನು ‘ನಮ್ಮ ನೆಲದ ಹೀರೋ’ ಎಂದು ಬಣ್ಣಿಸಿದ್ದಾರೆ. ಇತ್ತ ಕರ್ನಾಟಕದಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರವೇ ಆಚರಿಸುತ್ತಿದ್ದು, ಈಗಾಗಲೇ ಇದು ವಿವಾದಕ್ಕೆ ಕಾರಣವಾಗಿದೆ. ಇದೀಗ ಬದ್ಧವೈರಿ ಪಾಕಿಸ್ತಾನದ ಪ್ರಧಾನಮಂತ್ರಿಯೇ ಟಿಪ್ಪುವನ್ನು ತನ್ನ ವೀರ ಎಂದು ನೀಡಿದ ಹೇಳಿಕೆಯಿಂದಾಗಿ ಮುಂದಿನ ಬಾರಿ ಟಿಪ್ಪು ಜಯಂತಿ ವೇಳೆ ಕರ್ನಾಟಕದಲ್ಲಿ ವಿವಾದ ತೀವ್ರಗೊಳ್ಳುವ ಸಾಧ್ಯತೆ ಇನ್ನಷ್ಟುಹೆಚ್ಚಾಗಿದೆ. ನಮ್ಮ ಹೀರೋ: […]
↧