ಲಂಡನ್: ಒಂದು ಕಾಲದಲ್ಲಿ ರಾಜನಂತೆ ಜೀವನ ನಡೆಸುತ್ತಿದ್ದ ಉದ್ಯಮಿ ವಿಜಯ್ ಮಲ್ಯ ಇದೀಗ ಸಾಲ ತೀರಿಸುವುದಕ್ಕಾಗಿ ತಮ್ಮ ಪತ್ನಿ, ಮಕ್ಕಳು ಹಾಗೂ ವ್ಯಾವಹಾರಿಕ ಪಾಲುದಾರರ ದುಡ್ಡಿನಲ್ಲಷ್ಟೇ ಬದುಕು ಸಾಗಿಸುತ್ತಿದ್ದಾರೆ. ಮಲ್ಯ ಅವರ ಜತೆಗಾರ್ತಿ ಪಿಂಕಿ ಲಾಲ್ವಾನಿ ವರ್ಷಕ್ಕೆ 1.35 ಕೋಟಿ ರೂ.ಗಳಷ್ಟು ಸಂಪಾದನೆ ಮಾಡುತ್ತಿದ್ದಾರೆ. ಬಿಲಿಯನೇರ್ ಆಗಿದ್ದ ಮಲ್ಯ ಬಳಿ ಈಗ 328 ಮಿಲಿಯ ಪೌಂಡ್ (ಸುಮಾರು 2,956 ಕೋಟಿ ರೂ.) ಮಾತ್ರ ಉಳಿದಿದೆ. ಇವೆಲ್ಲವನ್ನೂ ಅವರು ಕರ್ನಾಟಕ ಹೈಕೋರ್ಟ್ ಸಾಲ ತೀರಿಸುವ ಕೊಡುಗೆಯಾಗಿ ಪ್ರಸ್ತಾಪ ಮುಂದಿಟ್ಟಿದ್ದಾರೆ. […]
↧