ಮೆಲ್ಬೋರ್ನ್, ಜೂ.27-ಮನೆಗೆಲಸದ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆಸಿದ ಆರೋಪಕ್ಕೆ ಗುರಿಯಾಗಿರುವ ನ್ಯೂಜಿಲೆಂಡ್ನ ಭಾರತೀಯ ರಾಯಭಾರಿ ರವಿ ತಾಪರ್ ಅವರನ್ನು ಮರಳಿ ಭಾರತಕ್ಕೆ ಕರೆಸಿಕೊಳ್ಳಲಾಗಿದೆ. ನ್ಯೂಜಿಲೆಂಡ್ನ ರಾಯಭಾರ ಕಚೇರಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಅವರ ಮೇಲೆ ರವಿ ತಾಪರ್ ಅವರ ಪತ್ನಿ ಶರ್ಮಿಲಾ ದೌರ್ಜನ್ಯ ನಡೆಸಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ದೌರ್ಜನ್ಯ ತಡೆಯಲಾಗದೆ ಕತ್ತಲಿನಲ್ಲಿ 20 ಕಿ.ಮೀ. ವಿಲ್ಲಿಂಗ್ಟನ್ನಿಂದ ನಡೆದುಕೊಂಡು ಹೋಗಿ ದೂರದ ರಾಜ್ಯದಲ್ಲಿ ಪತ್ತೆಯಾಗಿದ್ದರು. ಈ ಪ್ರಕರಣ […]
↧