ಉದ್ಯಮಿ, ಬಹುಕೋಟಿ ವಂಚಕ ನೀರವ್ ಮೋದಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಯುನೈಟೆಡ್ ಕಿಂಗ್ಡಮ್ನ ವೆಸ್ಟ್ಮಿನ್ಸ್ಸ್ಟರ್ ನ್ಯಾಯಾಲಯ ತಿರಸ್ಕರಿಸಿದೆ. ಈ ಮೂಲಕ ಜಾಮೀನು ಪಡೆದು ಜೈಲಿನಿಂದ ಆಚೆ ಬರುವ ನೀರವ್ ಮೋದಿ ಎರಡನೇ ಪ್ರಯತ್ನವೂ ವಿಫಲವಾಗಿದೆ. ಅರ್ಜಿ ಕುರಿತ ಮುಂದಿನ ವಿಚಾರಣೆಯನ್ನು ಮೇ 24ಕ್ಕೆ ಕೋರ್ಟ್ ಮುಂದೂಡಿದೆ. ಇತ್ತೀಚೆಗಷ್ಟೇ ನೀರವ್ ಮೋದಿ ಲಂಡನ್ನ ಹಾಲ್ಬಾರ್ನ್ ಮೆಟ್ರೋ ಸ್ಟೇಷನ್ನಲ್ಲಿ ಬಂಧನಕ್ಕೊಳಗಾಗಿದ್ದರು. ಇಂದು ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ 13,500 […]
↧