ನವದೆಹಲಿ: ಕಳೆದ ಭಾನುವಾರದಂದು 250 ಮಂದಿಯನ್ನು ಬಲಿತೆಗೆದುಕೊಂಡ ಸರಣಿ ಬಾಂಬ್ ಸ್ಫೋಟಗಳ ಮೂಲಕ ಶ್ರೀಲಂಕಾದಲ್ಲಿ ಉಗ್ರವಾದ ಹೆಡೆ ಬಿಚ್ಚಿ ನಿಂತಿದೆ. ಲಂಕಾದಲ್ಲಿ ಉಗ್ರರ ದಮನಕ್ಕಾಗಿ ಸಹಾಯ ಮಾಡಲು ಭಾರತ ಸಿದ್ಧವಾಗಿದೆ. ಅದಕ್ಕಾಗಿ ವಿಶೇಷ ಎನ್ಎಸ್ಜಿ ಕಮಾಂಡೋಗಳ ಪಡೆಯನ್ನು ಸಜ್ಜಾಗಿರಿಸಿಕೊಂಡಿದೆ ಎಂಬ ಸುದ್ದಿ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಅವರು, ಲಂಕಾದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಲು ತಮ್ಮ ದೇಶ ಸಮರ್ಥವಾಗಿದೆ. ತಮಗೆ ವಿದೇಶ ಸೈನಿಕರ ಅಗತ್ಯವಿಲ್ಲ. ಭಾರತದ ಎನ್ಎಸ್ಜಿ ಬೇಕಾಗಿಲ್ಲ ಎಂದು ಹೇಳಿದರು. […]
↧