ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನಾ ಎಂಬ ಜಿಲ್ಲೆಯ ಹಳ್ಳಿಯೊಂದರಲ್ಲಿ 500ಕ್ಕೂ ಹೆಚ್ಚಿನ ಮಕ್ಕಳಿಗೆ ಹೆಚ್ಐವಿ ಸೋಂಕು ತಗುಲಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ಹೆಚ್ಚಿನವರು ರಟೊಡೆರೊ ಎಂಬ ಗ್ರಾಮದವರಾಗಿದ್ದಾರೆ. ಈ ಹಳ್ಳಿಯಲ್ಲಿರುವ ವೈದ್ಯರ ನಿರ್ಲಕ್ಷ್ಯದಿಂದ 410 ಮಕ್ಕಳಿಗೆ ಹಾಗೂ ಇತರೆ 100 ಮಂದಿಗೆ ಹೆಚ್ಐವಿ ಸೋಂಕು ತಗುಲಿದೆ. ತಮ್ಮ ಬಳಿ ಚಿಕಿತ್ಸೆಗೆಂದು ಬರುತ್ತಿದ್ದವರಿಗೆ ವೈದ್ಯನು ಒಂದೇ ಸಿರಿಂಜ್ ಬಳಸುತ್ತಿದ್ದನು. ಇದರಿಂದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರೆಲ್ಲರಿಗೂ ಸೋಂಕು ವ್ಯಾಪಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ […]
↧