ಬೆಂಗಳೂರು: ನಕಲಿ ಪಾಸ್ಪೋರ್ಟ್ ಆರೋಪದಡಿ ಪಶ್ಚಿಮ ಆಫ್ರಿಕಾದ ಸೆನೆಗಲ್ನಲ್ಲಿ 4 ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ರವಿ ಪೂಜಾರಿ ಪರಾರಿಯಾಗಿದ್ಧಾನೆ ಎನ್ನಲಾಗಿದೆ. ಮತ್ತೊಂದೆಡೆ ಆತ ಜೈಲಿನಿಂದಲೇ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಪೂಜಾರಿ ಜೈಲಿನಿಂದಲೇ ನೇರವಾಗಿ ಪರಾರಿಯಾಗಿದ್ದಾನೋ ಅಥವಾ ಸೆನೆಗಲ್ನಿಂದ ಪರಾರಿಯಾಗಿದ್ದಾನೋ ಎನ್ನುವುದು ಖಚಿತವಾಗಿಲ್ಲ. ಆದರೆ, ರವಿ ಪೂಜಾರಿ ಪರಾರಿಯಾಗಿರುವುದರ ಬಗ್ಗೆ ಮಾತ್ರ ಸೆನೆಗಲ್ ಪತ್ರಿಕೆಗಳು ವರದಿ ಮಾಡಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಪೊಲೀಸರು, ರವಿ […]
↧