ಲಂಡನ್ (ಜೂ.30): ಅರಬ್ ಸಂಯುಕ್ತ ಸಂಸ್ಥಾನದ ಪ್ರಧಾನಿ ಮೊಹ್ಮದ್ ಬಿನ್ ರಶಿದ್ ಅಲ್ ಮಕ್ತೋಮ್ ಪತ್ನಿ ಹಾಗೂ ರಾಜಕುಮಾರಿ ಹಯಾ ಬಿಂತ್ ಅಲ್ ಹುಸೇನ್ 270 ಕೋಟಿ ರೂ. ಹಣದ ಜೊತೆ ದೇಶ ಬಿಟ್ಟು ಲಂಡನ್ಗೆ ತೆರಳಿದ್ದಾರೆ. ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ಆಗಿರುವ ಮೊಹ್ಮದ್ ಪತ್ನಿ ಹಯಾ ಲಂಡನ್ನಲ್ಲಿ ತಲೆಮರಿಸಿಕೊಂಡಿದ್ದಾರೆ ಎನ್ನಲಾಗಿದೆ. ಅವರು ಮಕ್ಕಳಾದ ಜಲಿಲಾ (11), ಜಯೀದ್ (7) ಜೊತೆ ಮೊದಲು ಜರ್ಮನಿಗೆ ತೆರಳಿದ್ದರು. ಈ ವೇಳೆ ಅವರ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. […]
↧