ಢಾಕಾ[ಸೆ.23]: ಬಾಂಗ್ಲಾದೇಶದ ಮುಸ್ಲಿಂ ಸಂಪ್ರದಾಯದ ಅನ್ವಯ, ಮದುವೆ ದಿನ ಗಂಡಿನ ಕಡೆಯವರು ವಧುವಿನ ಮನೆಗೆ ಬಂದು, ಅಲ್ಲಿಂದ ದಿಬ್ಬಣವನ್ನು ಮದುವೆ ಮಂಟಪಕ್ಕೆ ಕರೆದೊಯ್ಯುವುದು ಸಂಪ್ರದಾಯ. ಆದರೆ ಸಂಪ್ರದಾಯಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮೆಹೆರ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ವಧು, ತಾನೇ ದಂಡುಕಟ್ಟಿಕೊಂಡು ವರನ ಮನೆಗೆ ಹೋಗಿ, ಅಲ್ಲಿಂದ ವರನ ಮನೆಯ ದಿಬ್ಬಣವನ್ನು ಮದುವೆ ಹಾಲ್‌ಗೆ ಕರೆದೊಯ್ದಿದೆ. ಹೀಗೆ ಸಂಪ್ರದಾಯ ಮುರಿದ ವಧುವಿನ ಹೆಸರು ಖಾದಿಜಾ ಅಕ್ತರ್ ಖುಷಿ. ಈ ಕುರಿತ ವಿಡಿಯೋ ಭಾರೀ ವೈರಲ್ ಆಗಿದೆ.
↧