ಲಂಡನ್: ಅಪ್ರಾಪ್ತೆ ಶಿಷ್ಯೆ ಜೊತೆ ಅಕ್ರಮ ಸಂಬಂಧ ಹೊಂದಿದ ಅಪರಾಧದ ಹಿನ್ನೆಲೆಯಲ್ಲಿ ಶಿಕ್ಷಕ ಮತ್ತು ಆತನ ಪತ್ನಿಗೆ ಭವಿಷ್ಯದಲ್ಲಿ ಪಾಠ ಹೇಳದಂತೆ ಬ್ಯಾನ್ ಮಾಡಲಾಗಿದೆ. ಅಪ್ರಾಪ್ತೆ ಶಿಷ್ಯೆ ಜೊತೆ ಪತಿ ಅಕ್ರಮ ಸಂಬಂಧವನ್ನ ಬಚ್ಚಿಟ್ಟದ್ದರಿಂದ ಪತ್ನಿಯೂ ಶಿಕ್ಷೆಗೆ ಗುರಿಯಾಗಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಸಮಿತಿ ಇಬ್ಬರನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಜೇನ್ ಮತ್ತು ಬ್ರಿಯಾನಾ ಇಂಗ್ಲೆಂಡಿನ ವಾರ್ವಿಕ್ ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದರು. […]
↧