ಇಸ್ಲಾಮಾಬಾದ್: ಅಮೆರಿಕ ಮತ್ತು ತಾಲಿಬಾನ್ ನಡುವಿನ ಸಂಧಾನ ಮಾತುಕತೆಯ ಹಿನ್ನೆಲೆಯಲ್ಲಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ಮೂವರು ಭಾರತೀಯ ಇಂಜಿನಿಯರ್ ಗಳ ಬಿಡುಗಡೆಗೆ ಒಪ್ಪಿರುವುದಾಗಿ ತಾಲಿಬಾನ್ ತಿಳಿಸಿದೆ. ತಾಲಿಬಾನ್ ಭಯೋತ್ಪಾದನಾ ಸಂಘಟನೆಗೆ ಸೇರಿದ್ದ ಶೇಖ್ ಅಬ್ದುಲ್ ರಹೀಂ ಮತ್ತು ಮೌಲ್ವಿ ಅಬ್ದುರ್ ರಶೀದ್ ಸೇರಿದಂತೆ 11 ಮಂದಿ ಉಗ್ರರನ್ನು ಬಿಡುಗಡೆ ಮಾಡುವಂತೆ ತಾಲಿಬಾನ್ ಷರತ್ತನ್ನು ಒಪ್ಪಿಕೊಂಡಿದ್ದು, ಅದಕ್ಕೆ ಬದಲಾಗಿ 2018ರಿಂದ ತಾಲಿಬಾನ್ ವಶದಲ್ಲಿದ್ದ ಮೂವರು ಭಾರತೀಯ ಇಂಜಿನಿಯರ್ ಗಳನ್ನು ಬಿಡುಗಡೆಗೊಳಿಸುತ್ತಿರುವುದಾಗಿ ಅಫ್ಘಾನ್ ತಾಲಿಬಾನ್ ಹೇಳಿರುವುದಾಗಿ ವರದಿ ವಿವರಿಸಿದೆ. ಭಾರತದ ಮೂವರು […]
↧