ಫ್ರಾನ್ಸ್, ಅ.8: ಇಲ್ಲಿ ಡಸಾಲ್ಟ್ ಏವಿಯೇಶನ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಔಪಚಾರಿಕವಾಗಿ ಭಾರತೀಯ ವಾಯುಪಡೆಗಾಗಿ ರಫೇಲ್ ಯುದ್ಧ ವಿಮಾನಗಳನ್ನು ಸ್ವೀಕರಿಸಿದರು. ರಫೇಲ್ ಯುದ್ಧ ವಿಮಾನ ಸ್ವೀಕರಿಸುವ ಮೊದಲು ಮಾತನಾಡಿದ ರಾಜನಾಥ್ ಸಿಂಗ್ ‘ಇದು ಐತಿಹಾಸಿಕ ದಿನ’ ಎಂದು ಬಣ್ಣಿಸಿದರು. 59 ಸಾವಿರ ಕೋಟಿ ರೂ. ಮೌಲ್ಯದ ಫೈಟರ್ ಜೆಟ್ ಡೀಲ್ ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವದಲ್ಲಿ ಹೊಸ ಮೈಲಿಗಲ್ಲು ಎಂದು ಅವರು ಈ ಸಂದರ್ಭ ಹೇಳಿದರು.
↧