ನ್ಯೂಯಾರ್ಕ್: ಫೇಸ್ಬುಕ್ನಲ್ಲಿ ಪರಿಚಯವಾದ 14 ವರ್ಷದ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ದುರುದ್ದೇಶದಿಂದ ಅಮೆರಿಕ ಮೂಲದ ವ್ಯಕ್ತಿಯೊಬ್ಬ ಇಂಡಿಯನಾಪೊಲಿಸ್ ಸಬರ್ಬ್ನಿಂದ ವಿಸ್ಕಾನ್ಸಿನ್ ನರಗದವರೆಗೂ ಸುಮಾರು 565 ಕಿ.ಮೀ ನಡೆದುಕೊಂಡು ಹೋಗಿ, ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವುದಾಗಿ ಅಮೆರಿಕದ ಅಟಾರ್ನಿ ಕಚೇರಿ ಮಾಹಿತಿ ನೀಡಿದೆ. ಆರೋಪಿ ಟಾಮಿ ಲೀ ಜೆಂಕಿನ್ಸ್(32) ವಿರುದ್ಧ ಪ್ರಕರಣ ದಾಖಲಾಗಿದ್ದು, ಕಂಪ್ಯೂಟರ್ ಮೂಲಕ ಅಪ್ರಾಪ್ತೆಯ ಮನವೊಲಿಸಿ, ಆಕೆಯನ್ನು ಕಾನೂನುಬಾಹಿರ ಲೈಂಗಿಕತೆಯಲ್ಲಿ ತೊಡಗುವಂತೆ ಪ್ರೇರೆಪಿಸಲು ಯತ್ನಿಸಿದ ಆರೋಪದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಈಗಾಗಲೇ ಅಪ್ರಾಪ್ತೆಯರೊಂದಿಗೆ […]
↧