ಕರಾಚಿ: ಪಾಕಿಸ್ತಾನ(Pakistan)ದಲ್ಲಿ ಹಣದುಬ್ಬರವು ನಿರಂತರವಾಗಿ ತನ್ನದೇ ಆದ ದಾಖಲೆಯನ್ನು ಮುರಿಯುತ್ತಿದೆ. ದೈನಂದಿನ ವಸ್ತುಗಳ ಬೆಲೆ ಗಗನಕ್ಕೇರಿರುವ ಮಧ್ಯೆ, ದೇಶದಲ್ಲಿ ಹಲವೆಡೆ ಒಂದು ಕಿಲೋ ಟೊಮೆಟೊ(Tomato) ಬೆಲೆ 400 ರೂಪಾಯಿಗಳನ್ನು ತಲುಪಿರುವ ಬಗ್ಗೆ ವರದಿಗಳು ಬಂದಿವೆ. ಪಾಕಿಸ್ತಾನದಲ್ಲಿ, ತರಕಾರಿಗಳ ಬೆಲೆಗಳು, ವಿಶೇಷವಾಗಿ ಟೊಮೆಟೊ ಕಳೆದ ಹಲವಾರು ದಿನಗಳಿಂದ ಜನರನ್ನು ಅಳುವಂತೆ ಮಾಡುತ್ತಿವೆ. ಪರಿಸ್ಥಿತಿಯನ್ನು ನಿಭಾಯಿಸಲು, ಪಾಕಿಸ್ತಾನ ಸರ್ಕಾರವು ಇರಾನ್‌ನಿಂದ ಟೊಮೆಟೊವನ್ನು ಆಮದು ಮಾಡಿಕೊಂಡಿತು, ಆದರೆ ಇರಾನಿನ ಟೊಮೆಟೊ ಮಾರುಕಟ್ಟೆಗೆ ಪ್ರವೇಶದ ಕೊರತೆಯಿಂದಾಗಿ, ಮಂಡಿಗಳಲ್ಲಿ ಅದರ ಬೆಲೆಯಲ್ಲಿ ಇಳಿಕೆ ಕಂಡುಬಂದಿಲ್ಲ. […]
↧