ಟೋಕಿಯೋ: ಭೂಮಿಯಲ್ಲಿ ಜೀವ ಸೃಷ್ಟಿ ಹೇಗೆ ಆಯಿತು ಎಂಬುದನ್ನು ಪತ್ತೆ ಹಚ್ಚಲು ವಿಜ್ಞಾನಿಗಳು ಅವಿರತ ಪ್ರಯತ್ನದಲ್ಲಿ ನಿರತರಾಗಿದ್ಧಾರೆ. ಜೀವ ಸೃಷ್ಟಿಯ ಪ್ರಕ್ರಿಯೆಗೆ ಸಕ್ಕರೆ ಅಣುಗಳು ಅತ್ಯಗತ್ಯ ಎಂಬ ಅಂಶವನ್ನು ವಿಜ್ಞಾನಿಗಳು ಈಗಾಗಲೇ ಗ್ರಹಿಸಿದ್ಧಾರೆ. ಆದರೆ, ಭೂಮಿಗೆ ಈ ಸಕ್ಕರೆ ಅಣು ಹೇಗೆ ಬಂತು ಎಂಬುದು ಪ್ರಮುಖ ಪ್ರಶ್ನೆ. ಉಲ್ಕಾಶಿಲೆಯೊಂದನ್ನು ಅಧ್ಯಯನ ಮಾಡಿದ ಜಪಾನ್ನ ವಿಜ್ಞಾನಿಗಳಿಗೆ ಮಹತ್ವದ ಸುಳಿವು ಸಿಕ್ಕಿದೆ. ಆಗಸದಿಂದ ಭೂಮಿಗೆ ಅಪ್ಪಳಿಸಿ ಬಿದ್ದಿರುವ ಉಲ್ಕಾಶಿಲೆಯೊಂದರಲ್ಲಿ ಸಕ್ಕರೆಯ ಅಣುಗಳನ್ನು ಅಧ್ಯಯನಕಾರರು ಪತ್ತೆ ಹಚ್ಚಿದ್ಧಾರೆ. ಭೂಮಿಯಲ್ಲಿ ಜೀವ ಸೃಷ್ಟಿಗೆ […]
↧