ಢಾಕಾ: ಬಾಂಗ್ಲಾದೇಶದಲ್ಲಿ ಸಂಚಲನ ಮೂಡಿಸಿದ್ದ ಢಾಕಾ ಕಫೆ ದಾಳಿ (2016) ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ ಅಲ್ಲಿನ ವಿಶೇಷ ಕೋರ್ಟ್ ಬುಧವಾರ ತೀರ್ಪು ಪ್ರಕಟಿಸಿದೆ. ಪ್ರಕರಣದ ಆರೋಪಿಗಳ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಏಳು ಉಗ್ರರಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ. ಢಾಕಾದ ಗುಲ್ಶನ್ ಪ್ರದೇಶದಲ್ಲಿರುವ ಹೋಲಿ ಆರ್ಟಿಸನ್ ಬೇಕರಿ ಮೇಲೆ 2016ರ ಜುಲೈ 1ರಂದು ಉಗ್ರ ದಾಳಿ ಆಗಿತ್ತು. ಆಗ ಕನಿಷ್ಠ 20 ಜನ ಪ್ರಾಣ ಕಳೆದುಕೊಂಡಿದ್ದರು. ಈ ಪೈಕಿ ಒಂಭತ್ತು ಇಟಲಿಯ ಪ್ರಜೆಗಳು, ಏಳು ಜಪಾನೀಯರು, […]
↧