ಅದು 2108ರಲ್ಲಿ ಸೈಬೀರಿಯಾದಲ್ಲಿ ಪತ್ತೆಯಾದ ಒಂದು ಮರಿಯೊಂದರ ಕಳೇಬರ. ಆದರೆ, ಈ ಕಳೇಬರಕ್ಕೆ ಏನೂ ಆಗಿಲ್ಲ. ಕಾರಣ, ಇದು ಹಿಮದೊಳಗೆ ಮುಚ್ಚಿ ಹೋಗಿತ್ತು. ಇದು ಎಷ್ಟು ವರ್ಷ ಹಳೆಯ ಮರಿ ಎಂಬ ಪ್ರಶ್ನೆಗೆ ತಜ್ಞರು ಸುಮಾರು 18,000 ವರ್ಷ ಎಂಬ ಉತ್ತರ ಕೊಡುತ್ತಾರೆ. ಸದ್ಯ ಈ ಮರಿಯ ಬಗೆಗಿನ ಅಧ್ಯಯನ ನಡೆಯುತ್ತಿದೆ. ಆ ಅಧ್ಯಯನವೇ ಕುತೂಹಲಕಾರಿಯಾಗಿದೆ. ವಿಜ್ಞಾನಿಗಳಾದ ಲವ್ ಡೇಲೆನ್ ಮತ್ತು ಡೋವ್ ಸ್ಟಾಂಟನ್ ಕಳೆದ ಒಂದು ವರ್ಷದಿಂದ ಈ ಪ್ರಾಣಿಯ ದೇಹದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. […]
↧