ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಪ್ ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಇದಲ್ಲದೆ ಬದುಕೇ ಇಲ್ಲಎಂದು ಚಡಪಡಿಸುವವರ ಸಂಖ್ಯೆ ಅಗಾಧ. ಮೂರ್ನಾಲ್ಕು ದಿನಗಳ ಹಿಂದೆ ಫೇಸ್ಬುಕ್ಗೆ ಅಡಿ ಇರಿಸಿದ ಕೂಡಲೇ ”ಮನ್ನಿಸಿ ಏನೋ ಎಡವಟ್ಟಾಗಿದೆ,” (Sorry, Something went wrong). ಇದನ್ನು ಸರಿಪಡಿಸಲು ಕಾರ್ಯನಿರತವಾಗಿದ್ದೇವೆ ಎಂಬ ವಾಕ್ಯ ಕಾಣಿಸಿತು. ಇನ್ಸ್ಟಾಗ್ರಾಂನಲ್ಲೂಇದೇ ಕತೆ. ಮುಖ್ಯ ಸರ್ವರ್ನ ಕಾನ್ಫಿಗರೇಶನ್ನಲ್ಲಿ ಬದಲಾವಣೆ ಮಾಡಿದ್ದರಿಂದ ಹೀಗಾಯ್ತು ಎನ್ನಲಾಗಿದೆ. ಫೇಸ್ಬುಕ್ನಲ್ಲಿ ಜೀವನ ಚರಿತ್ರೆ, ಭಾವಚಿತ್ರಗಳ ಬದಲು ಪೇಜ್ ಖಾಲಿ ಹೊಡೆಯುತ್ತಿತ್ತು. ಇದನ್ನು ಕಂಡು ಕೋಪಗೊಂಡವರು ಟ್ವಿಟರ್ನಲ್ಲಿ ಮಾರ್ಕ್ […]
↧